Tuesday, March 4, 2008

ಇಂತಿ ನಾಗು...!!

ಕ್ಷಣಕ್ಕೊಂದು.., ದಿನಕ್ಕೊಂದು ಕೆಲವೊಮ್ಮೆ ವರುಷಕ್ಕೊಂದು ಪಾಠ ಕಲಿಸೋ ಈ ಬದುಕಿನ ಮುಂದೆ ನಾ ಹೀಗೆ..,ನಾ ಹಿಂಗೆ ಬದುಕ್ತೀನಿ ಅಂಥ ಎಷ್ಟ್ ಜನ ಅನ್ಕೊಂಡಿದ್ದಾರೋ, ಅದೆಷ್ಟು ಜನ ಬದುಕಿದಾರೋ, ಬದುಕ್ತಾ ಇದಾರೋ ಗೊತ್ತಿಲ್ಲ..!
ಹಾಗೆನೆ ನನ್ ಬಗ್ಗೆ.., ನಾ ಹಿಂಗೆ ಅಂಥ ಹೇಳ್ಬೋದು.., ಆದ್ರೆ ಹಾಗೇ ಇರುತ್ತಿನಾ ಅದೂ ಗೊತ್ತಿಲ್ಲ..
ಈ ಗೊತು..,ಗೊತ್ತಿಲ್ಲದ ನಡುವೆಯೇ ಬದುಕ್ತಾ ಇದಿನಿ.. ಬದುಕ್ತೀನಿ.. ಅದು ಮಾತ್ರಾ ಗೊತ್ತು...!!

ಕೆಲವು ಅಚ್ಚರಿ ~ ಕೆಲವೊಮ್ಮೆ ಬೆಚ್ಚಿ ಬಿಳಿಸೋ ಕ್ಷಣಗಳ ತುಂಬಿಕೊಂಡಿರುವ ಈ ಬಾಳ ಪಯಣದಲಿ ನಮ್ಮೋವ್ರು.., ಗೆಳೆಯ-ಗೆಳತಿ.., ಪ್ರೇಮಿ ಹೀಗೆ ಯಾರುಯಾರೋ ಜೊತೆಗೆ ಬರ್ತಾರೆ, ಹಾಗೆ ಸಾಗ್ತಾ ಇರೋವಾಗಲೆ ನಮ್ ಕೈ ಬಿಟ್ಟು ಕೆಲವೊಮ್ಮೆ ನಮ್ಮ ದಾರಿಯನ್ನೇ ಬಿಟ್ಟು ಹೋಗಿರ್ತಾರೆ; ಆಗ ಗೊತ್ತಾಗಲ್ಲ.. ಗೊತ್ತಾದಾಗ ಮೌನ ಅನ್ನೋ ಮಸಣದಲಿ ಹೇಳದೇ ಉಳಿದ ಮಾತುಗಳು ಮಣ್ಣಾಗುತ್ತವೆ ಆಗ ಮನದ ತುಂಬ ಸೂತಕ..
ಆ ಸೂತಕದಲ್ಲೇ ಆ ಮನಸ್ಸು ಸತ್ತೋಗಬಹುದು ಇಲ್ಲ ಮತ್ತೆ ಅನಿಶ್ಚಿತತೆಯ ಬದುಕಿನೆಡೆಗೆ ಮುಖ ಮಾಡಿ ಹೊರಡಬಹುದು..! ಮತ್ತೆ ಅದೇ ಗೆಳೆಯ..ಗೆಳತೆ..ಪ್ರೇಮಿ..ಬಂಧು ಬಳಗ..!! ಮತ್ತದು ಸತ್ಯ ಹಾಗೆ ಸೂತಕದಿಂದ ಎದ್ದ ಮನ ಮುಂದೊಂದಿನ ಸತ್ತು ಇನ್ಯಾರದೋ ಮನೆಗೆ,ಮನಕೆ ಸೂತಕವಾಗಬಹುದು..!

ಬದುಕೋಕ್ಕೆ ಸಾವಿರ,ಕೋಟಿ ಸೂತ್ರಗಳಿರಬಹುದು.. ಅವು Increase ಆಗುತ್ತವೇ ಹೊರತು ಕಮ್ಮಿಯಾಗಲ್ಲ.. ಆ ಸೂತ್ರಗಳಲ್ಲಿ ತಮ್ಮ ನಡೆ,ನುಡಿ ಗೋತ್ರಕ್ಕೆ ಯಾವುದು ಒಪ್ಪುತ್ತೋ ಅದನ್ನ ಆಯ್ಕೆ ಮಾಡ್ಕೊಂಡು ಬದುಕೋರು ಇದ್ದಾರೆ.. ಅಥವಾ ತಮ್ಮದೇ ಒಂದು ಹೊಸ ಸೂತ್ರವನ್ನ ಮಾಡಿ, ಅದಕ್ಕೆ ತಕ್ಕಂತೆ ಬದುಕೋರು ಇರ್ತಾರೆ..!
ಈ ಸೂತ್ರ,ಗೋತ್ರಕ್ಕೆಲ್ಲ ತಲೆ ಕೆಡಿಸಿಕೊಳ್ಳದೆ ಬದುಕೋದು ಒಂದು ಸೂತ್ರವೇ..!
ನಂದು ಅದೇ ಸೂತ್ರ ಇರಬೇಕು..!
ಬದುಕು sine Waveನ ಪ್ರತೀಕ, ಒಂದೋ ಎತ್ತರದತ್ತ ಇಲ್ಲ ಇಳಿಜಾರಿನತ್ತ.. ಎತ್ತರಕ್ಕೇರಿದವ ಕೆಳಗಿಳಿಯೋದು ಮತ್ತೆ ಮೇಲೇರೋದು ಎಲ್ಲಾ ಸಾಧ್ಯವೇ...!

ಕ್ಷಮಿಸಿ ನಾ ನಂದೇ ಒಂದು ಹೊಸ ಸೂತ್ರ, ಥಿಯರಿ ಎನೂ ಕೊಡ್ತಾ ಇಲ್ಲ.. ಇಲ್ಲಿವರೆಗೆ ಅಂದ್ರೆ ಬುದ್ದಿ(...?) ಅನ್ನೋದ್ ಬಂದಾಗಿಂದ ಹೇಗೇಗೆ ಬದುಕಿನಿಂದ ಬುದ್ದಿ ಕಲಿತು ಬದುಕಿದಿನೋ, ಬದುಕ್ತಾ ಇದಿನೋ ಅದರ ಅಕ್ಷರ ರೂಪ ಇದು..
ಇದು ಬೊಗಳೆ ಅಂದ್ರೆ ಬೊಗಳೆ... ರಗಳೆ ಅಂದ್ರೆ ರಗಳೆ..!
ಯಾವ್ದೋ ಒಂದು Side'ಗ್ ಹೋಗ ಲೇ..!

yes.. i vil.. ಅದರಲ್ಲೇನಿದೆ..!

ಒಂದಂತೂ ಸತ್ಯ ನಮ್ ಗುರು ಖಲೀಲ್ ಗಿಬ್ರಾನ್ ಹೇಳೋ ಹಾಗೆ " ಸುಖ ಅನ್ನೋದ್ ನಿನ್ನ ಬಾಗಿಲ ಬಳಿ ನಿಂತಿದ್ರೆ ದುಃಖ ನಿನ್ನ ಹಾಸಿಗೆಯ ಮೇಲೆ ಮಲ್ಕೊಂಡಿರುತ್ತೆ.."
ಅವು ಒಂದೇ ನಾಣ್ಯದ ಎರಡು ಮುಖಗಳು..!

ಹೋಗಲೇ ಅತ್ಲಾಗೆ ಇವೆಲ್ಲಾ ನಮ್ಗೊತ್ತಿರೋದ್. ಹೊಗೋಗ್ ಅಂತೀರಾ ಅನ್ನಿ..
ಎನೋ ಇಲ್ಲಿ ಜಾಗ ಕೊಟ್ಟೊವರಲ್ಲ ಅಂಥ ಬರೆದಿವ್ನಿ..!
ತಪ್ಪಿದ್ರೆ ಗೊತ್ತಲ್ಲ ಏನ್ ಮಾಡ್ಬೇಕ್ ಅಂಥ..!

ಇದು ಇವತ್ತಿನ ತನಕ ಕಲಿತಿದ್ದು.. ಗೊತ್ತು ಮುಂದೆ ಬೇಜಾನ್ ಕಲಿಯೋಕ್ಕಿದೆ.. am ready 4 tat..!
ಹಾಗೆ ಕಲಿತು ಮುಂದೆ ಇದೇ ಜಾಗದಲ್ಲಿ ಮತ್ತೆ ಬರೀತೀನಿ ನನ್ನ ಬಗ್ಗೆ..!
ಅದು ಸಾಧನೆ ಆಗಿರಲಿ, ವೇದನೆ ಆಗಿರಲಿ ಯಾವದಾದರೂ ಸರಿಯೇ..!ನೀವು ಓದಿದರೆ ಸಂತಸ ಇಲ್ಲಾ ಅಂದ್ರೆ No ಸಂತಸ.. ಬೇಜಾರಂತೂ ಇಲ್ಲ..!

ನಗ್ ನಗ್ತಾ ಬದುಕ್ಬೇಕು ಅಂತಾರೆ, ಅದು ಕೂಡ ಬೋರಿಂಗ್ ಅಲ್ವಾ.., ಯಾವಾಗಲೂ ಸಂತೋಷವಾಗಿರೋದು.. ಅದಕ್ಕೆ ಇರಬೇಕು ನೋವು ಅನ್ನೋದು ಬಂದು ಲೋ ಮಗನೆ ನಾನೂ ಒಬ್ಬ ಇದಿನೋ ಅಂಥ ಬೆಚ್ಚಗೆ ಎಚ್ಚರಿಸಿ ಹೋಗುತ್ತೆ..

ಇಷ್ಟೆಲ್ಲಾ ಅಗಿ.., ಮುಂದೊಂದಿನ ನಾವು..ನೀವೆಲ್ಲಾ ಸತ್ತು, ಅದೇ ಮೇಲೇನೋ ಇದಿಯಂತಲ್ಲಾ ಅದು ನಿಜವಾಗ್ಲೂ ಇದ್ರೆ ಅಲ್ಲಿ Meet ಆಗಿ.. ಮಗ ನಾ ಹಿಂಗೆ ಬದುಕ್ದೆ ಕಣ್ಲಾ.., ನಾ ಅಂಗ್ ಬದುಕ್ದೇ ಕಣ್ಲಾ ಅಂಥ ಹೇಳ್ಕಂಡ್ ಖುಷ್ ಆಗಣಾ ಏನಂತೀರಾ...?

ಒಂದೋ ಹೆಂಗ್ ಬದುಕ್ತೀವಿ ಅನ್ನೋದ್ ಮುಖ್ಯ..
ಇಲ್ಲಾ ಬದುಕೋದೇ ಮುಖ್ಯ,,!!

ಕಾಲಕ್ಕಿಂತ ಬೇರೆ ಔಷಧವಿದೆಯೆ?

ನಿಜ, ಕಾಲ್ಪನಿಕಕ್ಕಿಂತ ಅನುಭವ ಕವನಕ್ಕೆ ಹೆಚ್ಚಿನ ಜೀವ ತುಂಬುತ್ತವೆ..
ಯಾವುದೊ ನೋವಿನಲ್ಲಿ ನಾನು ಇನ್ನೆಂದೂ ಎದೆಯಲ್ಲಿ ಹೂವರಳಿಸುವುದಿಲ್ಲ ಎಂದಿದ್ದೆ ನಿಜ.... ಆದರೆ, ಕಾಲಕ್ಕಿಂತ ಬೇರೆ ಔಷಧವಿದೆಯೆ!!? ಅದರ ಡಾಕ್ಟರಿಕೆಯಲ್ಲಿ ಎಲ್ಲ ಗಾಯಗಳು ಮಾಯುತ್ತವೆ!! (ಮುಳ್ಳಿನಿಂದಾದ ಗಾಯದ ಕುರುಹು, ಹೂವಿನ ನೆನಪನ್ನಂತೂ ಮಾಯಲು ಬಿಡುವಿದಿಲ್ಲ!!). ನಾವು ಎಷ್ಟೇ ಪ್ರಯತ್ನಿಸಿ, ಎದೆಯನ್ನು ಬರಡಾಗಿಸಿಟ್ಟರೂ, ತಂಗಾಳಿಯು ಎಲ್ಲಿಂದಲೂ ತಂದ ಬೀಜವನ್ನು,ಸಣ್ಣ ಸೋನೆಮಳೆ,ಮೊಳಕೆ ತರಿಸಿ, ಗಿಡವಾಗಿ ಚಿಗುರಿಸಿ, ನಮಗೆ ಗೊತ್ತಿಲ್ಲದಂತೆ ಪುಟ್ಟ ಹೂವನ್ನು ಅರಳಿಸಿ ಹೋಗುತ್ತದೆ...!! ಇದು ಎಲ್ಲ ಮನುಷ್ಯ ಪ್ರಯತ್ನವನ್ನು ಮೀರಿದ್ದು, ಹಾಗು ಬರಡನ್ನು ಬದುಕಾಗಿಸುವುದೇ ಜಗದ ನಿಯಮ...!! ಅಲ್ಲವೇ!!??

"ಕಾರಣಗಳು"

ಚಿಕ್ಕದೊಂದು ಕಾರಣ, ಅಪ್ಪ ಅಮ್ಮನೊಂದಿಗಿನ ಮುನಿಸು
ತೀರ ಬಾಲಿಶವಾಗಿ ಹಿಂದು ಮುಂದು ಯೋಚಿಸದೇ
ಆ ಹುಡುಗ ಸೀದ ನೇಣ ಕುಣಿಕೆಗೆ ಕೊರಳೊಡ್ಡಿದ್ದ
ಇದ್ದೊಬ್ಬ ಕುಡಿಯ ಸಾವಿನ ಹೊಡೆತ ತಾಳಲಾಗಲಿಲ್ಲ
ಮತ್ತೆ ಚಿಗುರುವ ಭರವಸೆ ಇರಲಿಲ್ಲ ಅವರಲ್ಲಿ
ಆ ಚಿತೆಯ ಬೆಂಕಿ ಅವರ ಬದುಕನ್ನು ಸುಡದಿರಲಿಲ್ಲ
ಮತ್ತೆ ಕೆಲವೇ ದಿನ, ಎಲ್ಲವನ್ನೂ ಬಿಟ್ಟು
ಮಗ ಕಾಲವಾದ ಮರದ ಇನ್ನೊಂದು ಬದಿಗೆ
ತಾವೂ ನೇತು ಬಿದ್ದರು ಹಗ್ಗದ ತುದಿಗೆ
ಇವರ ಬದುಕು ಬಾಳಲಾರಷ್ಟು ನಿಕೃಷ್ಟವಾಗಿತ್ತೆ?

ಮುಂಬಯಿಯ ರೈಲು ಸೇತುವೆಯೊಂದರಲ್ಲಿ
ಹಣ್ಣು ಹಣ್ಣು ಮುದುಕ, ಮುಗ್ಗಲು ಹಿಡಿದ ಬಟ್ಟೆಯೊಂದಿಗೆ
ಒಂದು ಕೈಯಲ್ಲಿ ಚಪ್ಪಲಿ ಇನ್ನೊಂದರಲ್ಲಿ ಭಿಕ್ಷೆ ಬಟ್ಟಲು
ತೆವಳುತ್ತಿದ್ದ ಜನರಿಂದ ಜನರೆಡೆಗೆ ಕೊಳೆತ ಕಾಲೆಳೆಯುತ್ತಾ
ಆದ್ರವಾಗಿ ಅನ್ನವನ್ನು ಬೇಡುತ್ತಾ, ಕರುಣೆಯ ಕೈಗಳಿಗಾಗಿ
ನೂಕ ನುಗ್ಗಲಿನಲ್ಲಿ ಯಾರೋ ಬೈಯ್ಯುತ್ತಿದ್ದರು ಆತನಿಗೆ
ಸಾಯಲು ಸಾಕಿತ್ತಲ್ಲವೇ ಈ ಸಂಪತ್ತು, ನೋವು

Monday, March 3, 2008

ಚಿಂತೆ ಇಲ್ದೇ ಇರೋವನಿಗೆ ಸಂತೇಲೂ ನಿದ್ದೆ

ಅದೇನೋ ಪಾಪ ಮಾಡಿರ್ತಾರೋ ಜನ ಈ ಸತ್ಯದ ಅರಿವು ಅವರಿಗೆ ಆಗೋದೆ ಇಲ್ಲ. ಬಾವಿ ಅಲ್ಲಿ ಬೆಳದ ಹಾಗೆ ಬೆಳೆದು ಬಾವಿ ನೆ ಸಮುದ್ರ ಅನ್ನೋವ್ರನ್ನ ನೋಡಿದ್ರೆ ಸಂಕಟ ಆಗುತ್ತೆ. ಹೇಳಿದ್ರು ತಿಳ್ಕೊಳಲ್ಲ ತಾವು ತಿಳ್ಕೊಲ್ಲೋ ಗೋಜಿಗೆ ಹೋಗೋಲ್ಲ..ಕೋಪವೆಂಬುದು ಮೂರ್ಖತನದಲ್ಲಿ ಆರಂಭಗೊಂಡು ಪಶ್ಚಾತ್ತಾಪದಲ್ಲಿ ಅಂತ್ಯಗೊಳ್ಳುತ್ತದೆ ನನ್ನ ದಾರಿ ನಿನ್ನ ದಾರಿ
ಒಂದೆಯಾಗಬೇಕಿಲ್ಲನನ್ನ ಗುರಿ ನಿನ್ನ ಗುರಿ ಒಂದೇ ಇರಲು ಬೇಕಿಲ್ಲ..
ನಡೆ ನಿನ್ನ ದಾರಿಯಲಿ
ಗುರಿ ಒಂದನಿಡಿದು ಆ ಗುರಿಯೇ ಕಾವುದು ನಿನ್ನಬರುವ ಕಷ್ಟಗಳ ಬಡಿದು..ನಿಲ್ಲುವ ತನಕ ಅಷ್ಟೇ ಕಲ್ಪನಾ ..ನಿನ್ನ ಮನಸು ಹೂನಂತಿರಲಿ
ಮಾತುಗಳು ಮುತ್ತಾಗಿರಲಿ
ಅಳುವವರ ಕಣ್ಣೀರನೋರೆಸುವ ಕೈಗಳವು ನಿನ್ನಾವಾಗಿರಲಿ ದುರಂತ..

ಕ್ಲಾಸ್ ರೂಮ್ ಎಂಬ ನಾಲ್ಕು.....

ಕ್ಲಾಸ್ ರೂಮ್ ಎಂಬ ನಾಲ್ಕು ಗೋಡೆಯ ಮಧ್ಯೆ
ತುಂಬಿದ್ದ ಮೌನ ಮತ್ತೆ ಮುರಿಯುತ್ತಿದೆ.
ಚಿಲಿಪಿಲಿಗುಡುವ ಗೂಡಿನ ಗುಬ್ಬಚ್ಚಿಗಳಂತೆ
ಚಿಣ್ಣರ ಕಲರವ ಸುತ್ತಲೂ ಧ್ವನಿಸುತ್ತಿದೆ.
ರಜೆಯಲ್ಲಿ ಗರಿಗೆದರಿ ಹಾರಿದ್ದ ಮಕ್ಕಳೆಂಬ ಹಕ್ಕಿಗಳು
ಮತ್ತೆ ಮಳೆಗಾಲಕ್ಕೆ ಬೆಚ್ಚಗಿನ ಗೂಡು ಸೇರಿವೆ.
ಕ್ಲಾಸ್ ರೂಮ್ ಎಂಬ ಮಾಯಾಲೋಕದಲ್ಲಿ ಎಷ್ಟೋ
ಮನಸುಗಳು ಅರಳುತ್ತವೆ ಮತ್ತೆಷ್ಟೋ ಮುದುಡುತ್ತವೆ.
ಒಮ್ಮೊಮ್ಮೆ ಈ ಭಯಂಕರ ಲೋಕ ಎಷ್ಟೋ
ಬಾಲ್ಯಗಳ ಕೊಂದು ಹಾಕುತ್ತದೆ.
ಅದೆಷ್ಟೋ ಬಣ್ಣದ ಕನಸುಗಳು ಜೀವ ತಳೆಯುತ್ತವೆ
ಮತ್ತೆ ಹಲವರ ಭವಿಷ್ಯಕ್ಕೆ ಭಾಷ್ಯ ಬರೆಯುತ್ತದೆ.
ಅರಿವೇ ಮೂಡದ ಕುರಿಗಳನ್ನು ಕಟ್ಟಿ ಹಾಕಿ
ಕೆಲ ಕಂಠಗಳು ಏನೋ ಗಿಳಿಪಾಠ ಹೇಳಿಸುತ್ತಿವೆ.
ಕ್ಲಾಸ್ ರೂಮ್ ಎಂಬ ನಾಲ್ಕು ಗೋಡೆಯ ಮಧ್ಯೆ
ತುಂಬಿದ್ದ ಮೌನ ಮತ್ತೆ ಮುರಿಯುತ್ತಿದೆ.- ...........

ನಿದ್ದೆಯ ಬೇಲಿಯ ಕನಸಿನ ಬನದಲಿ

ಇವತ್ತು ಬೆಳಿಗ್ಗೆ ಏಳ್ತಾ ಇದ್ದಂಗೆ ಒಂದು ಕನಸು! ದೂರದಲ್ಲೆಲ್ಲೊ ಸಾಗರದ ಅಲೆಗಳ ಅಬ್ಬರ. ಕಾಡಿನ ಕಾಲು ದಾರಿಯಲ್ಲಿ ನಿನ್ನ ಜೊತೆ ನಡೆಯುತ್ತಿರುವ ಹಾಗೆ. ನೀನು ಗಿಡ ಮರ ತೋರಿಸುತ್ತ ಮುನ್ನಡೆಯುತ್ತ ಇದ್ದೆ. ನಾನು ನಿನ್ನ ಹೆಗಲ ಮೇಲೆ ನನ್ನ ಎರಡೂ ಕೈ ಇಟ್ಟು ನಿನ್ನ ಹಿಂಬಾಲಿಸ್ತಾ ಇದೀನಿ. ನೀನು ಹಿಂದೆ ತಿರುಗಿದಾಗಲೆಲ್ಲ ನಿನ್ನ ಗಲ್ಲದ ಸ್ಪರ್ಷದಿಂದ ನನ್ನ ಕೈ ನವಿರೇಳುತ್ತಿದೆ. ಸುಮ್ಮನೆ ನಿನ್ನ ಹಾಡಿನ ಗುನುಗು ಮನಸೆಲ್ಲ ತುಂಬುತ್ತಿದೆ. ಆ ದಾರಿ ಕೊನೆಯಿಲ್ಲದಂತೆ ಹರಿಯುತ್ತಿದೆ. ಕಣ್ಣು ತೆರೆದು ಕನಸನರಿಯುವ ಮನಸಾಗುತ್ತಿಲ್ಲ.

ಇದು ಹೀಗೆ ಇರಲಿ!!

"ಕನ್ನಡ ಅಭಿಮಾನಿ"

'ಬೆಂಗಳೂರು ಕನ್ನಡಿಗರ ಸ್ವತ್ತು. ಇಲ್ಲಿ ಯಾರ ಸೊಕ್ಕು ನಡೆಯುವುದಿಲ್ಲ, ಅದೂ ನನ್ನ ಮುಂದೆ' ಅಂತ ದಬಾಯಿಸ್ತಾ ಇದ್ದೆ ಒಬ್ಬ ಕೊಂಗನನ್ನ. ಹಾಗೆ ಮಾತನಾಡುತ್ತಿದ್ದಂತೆ ನನ್ನ ಕನ್ನಡ ಮಿತ್ರರೆಲ್ಲ ನನ್ನನ್ನು ಬಿಟ್ಟ ಕಣ್ಣು ಬಿಟ್ಟಂತೆ ನೋಡುತ್ತಿದ್ದರು. ಅವರ ಮುಖದಲ್ಲಿ ನನಗಾಗಿ ಬೇಕಾದಷ್ಟು ಪ್ರಶ್ನೆಗಳಿದ್ದವು. ಕೆಲವರಂತು ಇದೆಲ್ಲ ಬೇಕಾ? ಯಾಕೆ ಜಗಳಗಂಟಿ ಆಗಿ ಬಿಟ್ಟಿದ್ದೀಯಾ? ಅನ್ನೋಕೆ ಶುರು ಮಾಡಿದ್ರು. ನಾನು ಅರೆರೆ! ಇವತ್ತು ಹೀಗೆ ಇವ್ನು ಮಾತಡ್ತಾನೆ, ನಾಳೆ ಇನ್ನೊಬ್ಬ. ಸುಮ್ನೆ ಇರಿ ಎಲ್ಲ. ಇವ್ರಿಗೆ ಅಲ್ಲಲ್ಲೆ ಪಾಠ ಕಲ್ಸಬೇಕು.. ನನ್ನ ಮಿತ್ರರಲ್ಲ. ನೀನು ಕೋಳಿ ಜಗಳ ಶುರು ಮಾಡ್ಬೇಡ. ನಾನು ಏನೂ ಮಾತನಾಡಲಿಲ್ಲ, ಸುಮ್ಮನೆ ಬಂದೆ. ನನ್ನ ಉದ್ದೇಶ ಇಷ್ಟೆ ಆಗಿತ್ತು... 'ನೋಡಿ ಸ್ವಾಮಿ ನಾನಿರೋದೆ ಹೀಗೆ! adjust ಮಾಡ್ಕೊಳೊಕೆ ನನ್ನಿಂದ ಆಗೊಲ್ಲ ...ಅದೂ ಕನ್ನಡದ ವಿಷ್ಯದಲ್ಲಿ'


ಕನ್ನಡದ ಬಗ್ಗೆ ವಿಷಯ ಬಂದಾಗೆಲ್ಲ ನನ್ನ ಮೈ ರೋಮ ರೋಮ ಸೆಟೆದು ನಿಲ್ಲುತ್ತೆ. ಅದೂ ಹೆಚ್ಚ್ಚು ಕಮ್ಮಿ ಮಾತಾಡಿದ್ರೆ ಇರೊಲ್ಲ . ನನ್ನ ಮಿತ್ರರೆಲ್ಲ ನಂಗೆ ' ನೀನು ಕನ್ನಡ ಅಭಿಮಾನಿ' ಅನ್ನೋಕೆ ಶುರು ಮಾಡಿದ್ರು. ಹೌದು ನಾನು , ನಿಮಗೆಲ್ಲ ಎನೂ ಅನ್ನೊಸೊಲ್ವ? ನಿಮ್ಮ ಅಮ್ಮನ್ನ ಬೈದ್ರೆ ಸುಮ್ಮನೆ ಬರ್ತೀರಾ? ಅಷ್ಟೆ ನನ್ನ ಪ್ರಶ್ನೆ 'ನೋಡಿ ಸ್ವಾಮಿ ನಾನಿರೋದೆ ಹೀಗೆ! adjust ಮಾಡ್ಕೊಳೊಕೆ ನನ್ನಿಂದ ಆಗೊಲ್ಲ ...ಅದೂ ಕನ್ನಡದ ವಿಷ್ಯದಲ್ಲಿ'

ಮತ್ತೇನು ತರ್ಲೆ ಬಂತು. ನಂಗಿರೋದು ಒಂದೆ ವ್ಯಕ್ತಿತ್ತ್ವ, ನಂಗಿರೋದು ಒಂದೆ ಆತ್ಮ. ನಂಗಿರೋಳು ಒಬ್ಳೆ ಅಮ್ಮ, ಬೇರೆ ಬೇರೆ ಮುಖ್ವಾಡ ಹಾಕಿಕೊಂಡು ತಿರುಗೋಕೆ ಆಗೊಲ್ಲ' 'ನೋಡಿ ಸ್ವಾಮಿ ನಾನಿರೋದೆ ಹೀಗೆ! adjust ಮಾಡ್ಕೊಳೊಕೆ ನನ್ನಿಂದ ಆಗೊಲ್ಲ ...ಅದೂ ಕನ್ನಡದ ವಿಷ್ಯದಲ್ಲಿ'

೪ ಜನ ಉತ್ತರ ಭಾರತೀಯರಿದ್ದ ಮಾತ್ರಕ್ಕೆ ಹಿಂದಿ ಶುರು ಮಾಡ್ಕೊಳೋದ್ರಲ್ಲಿ ಎನರ್ಥ? ಕರ್ನಾಟಕಕ್ಕೆ ಬಂದು ಎಷ್ಟು ದಿನಗಳಾದ್ವು? ತೀರ ಹೊಸಬರು ಆದ್ರೆ, englishನಲ್ಲಿ ಮಾತಾಡ್ತೀನಿ. ಅದೂ ಒಂದು ತಿಂಗಳು ಮಾತ್ರ, ಆಮೇಲೆ ಅದೆ ಮುಖ ಸಿಕ್ಕಿದ್ರೆ, ನನ್ನ ಬೈಬೆಡಿ 'ನೋಡಿ ಸ್ವಾಮಿ ನಾನಿರೋದೆ ಹೀಗೆ! adjust ಮಾಡ್ಕೊಳೊಕೆ ನನ್ನಿಂದ ಆಗೊಲ್ಲ ...ಅದೂ ಕನ್ನಡದ ವಿಷ್ಯದಲ್ಲಿ'

ಕಲ್ಪನೆಯ ಹುಡುಗಿ

ಪ್ರತಿದಿನ ನನ್ನ ಕಲ್ಪನೆಗಳಲ್ಲಿ ಬರುತ್ತಿ ,ನೀನು ನಿಜವಾಗಿ ನನ್ನ ಜೀವನದಲ್ಲಿ ಬರುವುದು ಯಾವಾಗ?ಇಂಥ ಪ್ರಶ್ನೆ ಕೆಳುತ್ತ ಕೆಳುತ್ತಲೆ ಯೌವನ ಕಳೆದು ಹೋದರೆ ಎಂಬ ಚಿಂತೆಯಾಗಿದೆ ಗೆಳತಿ. ಈ ಬಡಾಪಯಿಯ ಮೇಲೆ ಒಂದಿಷ್ಟು ಕರುಣೆ
ಇರಲೀ.
ನನ್ನ ಜೊತೆ ನಗುನಗುತ್ತಾ ಮತನಡುತೀ ನನ್ನೊಡನಿರುವುದು ನಿನಗಿಷ್ಟ ಎನ್ನುವುದು ನಂಗೊತ್ತು. ನನ್ನ ಕಣ್ಣಲ್ಲಿ ಕಣ್ಣೀಟ್ಟರೆ ನಿನ್ನ ಮುಖ
ಹೌದೋ ಅಲ್ಲವೋ ಎಂಬಂತೆ ರಂಗೇರುವುದನ್ನು ಗಮನಿಸಿದ್ದೇನೆ .ಆದರೆ ಆ ಕಣ್ಣುಗಳು ನಿಜಕ್ಕೂ ಹೇಳುವುದೇನೂ? ಬರೀ ಸ್ನೇಹವೊ ಅಥವಾ ಪ್ರೀತಿ-ಗೀತೀ ಏನಾದರೂ...........? ಗೊತ್ತಾಗುತ್ತಿಲ್ಲ.ನೀನು ಬಲು ಚಾಣಾಕ್ಷೆ ,ಗುಟ್ಟು ಬಿಟ್ಟುಕೊಡುವುದಿಲ್ಲ ,
ಅಬ್ಬಾ;ಅದೇನು ವೈಯಾರ ನಿನ್ನದು ; ತಕ್ಷಣ ಬಾಹುಗಳಲ್ಲಿ ಬಂಡಿಸಿಬಿಡಬೇಕು ಎಂಬ ಮತ್ಟೇರಿಸುವಂತದ್ದು , ಆದರೆ
ಆ ಸ್ವಾತಂತ್ರ್ಯ ನನಗಿದೆಯೇ ? ಎಸ್ಟು ದಿನ ಹೀಗೆ ಸತಾಯಸುತೀ ಹುಡುಗಿ? ಎಸ್ಟು ಅಂತ ಕಾಯವುದು? ಏನಿದೆ ನನ್ನ ಮನದಲಿ? ಹೆಳೀಬಿಡು.
ಹೃದಯವನ್ನು ಹಗುರವಾಗಿಸು ಎಂದು ನನ್ನ ಮನಸ್ಸುಕದ್ದವಳನ್ನು ಅಂಗಲಾಚುತ್ತೇನೆ..

Friday, February 22, 2008

'''''''''''''''''''''''''''''''''''''''''''''''''''''''KAADUMANE ESTATE"''''''''''''''''''''''''''''''''''''''

BANGALORE NA INDUSTRIAL ESTATE INDA SAKALESHPURADA KAADUMNE ESTATE VAREGE NADEYO ONDU SUSPENSE LOVE STORY......KAADU MANE ESTATE


STORY
SCREEN PLAY
DIALOUGES
N
DIRECTION

BY
KIRAN PATEL
A RAY OF HOPE

Tuesday, January 15, 2008